ಸಿಎಂ ಬಿಎಸ್ ವೈ ಹೇಳಿಕೆಯಿಂದ ಇನ್ನಷ್ಟು ಗರಿಗೆದರಿದ ಸಚಿವಾಕಾಂಕ್ಷಿಗಳ ನಿರೀಕ್ಷೆ!
ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಎರಡು-ಮೂರು ದಿನಗಳಲ್ಲಿ ಅಂತಿಮವಾಗಲಿದೆ
ಮೈಸೂರು: ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಿಕೆ ಆಗುತ್ತಲೇ ಇರುವ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಎರಡು-ಮೂರು ದಿನಗಳಲ್ಲಿ ಅಂತಿಮವಾಗಲಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ(CM B.S.Yediyurappa), ಸಂಪುಟ ವಿಸ್ತರಣೆ ಅಥವಾ ಪುನಾರಚನೆಯೋ ಎಂಬುದು ಎರಡುಮೂರು ದಿನಗಳಲ್ಲಿ ಅಂತಿಮವಾಗಲಿದೆ. ವರಿಷ್ಠರ ಜೊತೆ ಮಾತುಕತೆ ನಡೆಸಿದ್ದು , ಎಲ್ಲವೂ ಸುಖಾಂತ್ಯ ಕಾಣಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಡಿ. 5 ರಂದು 'ಕರ್ನಾಟಕ ಬಂದ್' ಪಕ್ಕಾ: ವಾಟಾಳ್ ನಾಗರಾಜ್
ಖುದ್ದು ಸಿಎಂ ಅವರೇ ಈ ಹೇಳಿಕೆ ನೀಡಿರುವುದರಿಂದ ಸಚಿವ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಇನ್ನಷ್ಟು ಗರಿಗೆದರಿದೆ. ಅಧಿವೇಶನ ಆರಂಭಕ್ಕೂ ಮುನ್ನವೇ ಸಚಿವರಾಗಬಹುದೆಂದು ಲೆಕ್ಕ ಹಾಕಿದ್ದ ಆಕಾಂಕ್ಷಿಗಳ ಆಸೆಗೆ ಇನ್ನಷ್ಟು ರೆಕ್ಕೆಪುಕ್ಕ ಬಂದಿದೆ. ಮೂಲಗಳ ಪ್ರಕಾರ ಶುಕ್ರವಾರ ಸಿಎಂ ಸಂಪುಟ ವಿಸ್ತರಣೆ ಪುನಾರಚನೆ ಮಾಡಲು ಒಲವು ತೋರಿದ್ದು, ಈ ಬಾರಿ 7ರಿಂದ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಭವವಿದೆ.
ಹೈಕಮಾಂಡ್‌ಗೆ ಸಡ್ಡು ಹೊಡೆದ್ರಾ ಸಿಎಂ ಬಿಎಸ್‌ವೈ..!?
ದೆಹಲಿ ವರಿಷ್ಠರು ಕಳುಹಿಸಿರುವ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ಸಿಎಂ ಜೊತೆ ಚರ್ಚೆ ನಡೆಸಿದ್ದು, ಬಹುತೇಕ ಸಮ್ಮತಿ ಸಿಕ್ಕಿದೆ ಎನ್ನಲಾಗುತ್ತಿದೆ. ಸಂಪುಟ ಪುನಾರಚನೆಯಾದರೆ ಹಾಲಿ ಸಚಿವರಾದ ಸಿ.ಸಿ.ಪಾಟೀಲ್, ಪ್ರಭು ಚವ್ಹಾಣ್, ಕೋಟಾ ಶ್ರೀನಿವಾಸ್ ಪೂಜಾರಿ, ಶಶಿಕಲಾ ಜೊಲ್ಲೆ ಮತ್ತಿತರರು ಕೋಕ್ ಪಡೆಯುವ ಸಂಭವವಿದೆ.
India vs Australia: #ಕನ್ನಡದಲ್ಲಿ_ಕಾಮೆಂಟರಿ ನೀಡಲು ಟ್ವಿಟರ್ ಅಭಿಯಾನ
ಒಂದು ವೇಳೆ ಪುನಾರಚನೆಯಾಗದೆ ವಿಸ್ತರಣೆಯಾದರೆ ವಿಧಾನಪರಿಷತ್ ಸದಸ್ಯರಾದ ಆರ್.ಶಂಕರ್, ಎಂಟಿಬಿ ನಾಗರಾಜ್, ಶಾಸಕರಾದ ಉಮೇಶ್‍ಕತ್ತಿ, ಮುನಿರತ್ನ, ಎಸ್.ಅಂಗಾರ, ಸುನೀಲ್‍ಕುಮಾರ್, ಅರವಿಂದ ಲಿಂಬಾವಳಿ ಮತ್ತಿತರರ ಹೆಸರು ಚಾಲ್ತಿಯಲ್ಲಿವೆ.
ಪಕ್ಷ ಸಂಘಟನೆಗೆ ಬಿಜೆಪಿಯಿಂದ 'ಹೊಸ ತಂತ್ರ'! 90 ಸಾವಿರ ಕಾರ್ಯಕರ್ತರಿಗೆ ಅಧಿಕಾರ